
ಬೆಂಗಳೂರು–ಬಳ್ಳಾರಿ ಬಹು ಅಕ್ಷೀಯ ಬಸ್ ಸೇವೆ ಆರಂಭ
The story in brief
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರ ವಿಭಾಗದ ಬೆಂಗಳೂರು–ಬಳ್ಳಾರಿ ಬಹು ಅಕ್ಷೀಯ ಬಸ್ ಸೇವೆ ದೈನಂದಿನ ಸಂಚಾರ ಆರಂಭಿಸಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಜೆ 4ಕ್ಕೆ ಹೊರಟು ಚಳ್ಳಕೆರೆಗೆ ರಾತ್ರಿ 8ಕ್ಕೆ, ಬಳ್ಳಾರಿಗೆ ರಾತ್ರಿ 9.45ಕ್ಕೆ ತಲುಪುತ್ತದೆ. ಬಳ್ಳಾರಿಯಿಂದ ಸಂಜೆ 5.06ಕ್ಕೆ ಹೊರಟು ಚಳ್ಳಕೆರೆಗೆ ಸಂಜೆ 6.30ಕ್ಕೆ, ಬೆಂಗಳೂರಿಗೆ ರಾತ್ರಿ 10.40ಕ್ಕೆ ತಲುಪುತ್ತದೆ. ಬೆಂಗಳೂರಿನಿಂದ ಚಳ್ಳಕೆರೆಗೆ ₹ 634, ಚಳ್ಳಕೆರೆಯಿಂದ ಬಳ್ಳಾರಿಗೆ ₹ 802 ದರ ಇದೆ.