
ಬೆಂಗಳೂರಿನಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳು
The story in brief
11ನೇ ವಾರ್ಷಿಕ ಗಣೇಶೋತ್ಸವದಲ್ಲಿ ಚೌಡಪ್ಪ ಬಡಾವಣೆಯ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಎಸ್.ಆರ್.ವಿಶ್ವನಾಥ್ ಹಾಗೂ ವನಶ್ರೀ ವಿಶ್ವನಾಥ್ ಭಾಗವಹಿಸಲಿದ್ದಾರೆ. ಹೆಣ್ಣೂರು ಗ್ರಾಮದ ಚಿಕ್ಕಣ್ಣ ಬಡಾವಣೆಯ ವಿನಾಯಕ ಮಿತ್ರ ಮಂಡಳಿಯಲ್ಲಿ ಗಣೇಶ ಪ್ರತಿಷ್ಠಾಪನೆ ನಡೆಯಲಿದೆ. ಜಿ.ತಿಮ್ಮಯ್ಯ ಬಡಾವಣೆಯ ಶಂಕರನಾಗ ವಿನಾಯಕ ಗೆಳೆಯರ ಬಳಗದಲ್ಲಿ ಮಹಾಮಂಗಳಾರತಿ ಹಾಗೂ ವಿನಾಯಕನ ರಥೋತ್ಸವ ನಡೆಯಲಿದೆ. 26ನೇ ವಾರ್ಷಿಕ ಗಣೇಶೋತ್ಸವದಲ್ಲಿ ನಂದಿನಿ ಬಡಾವಣೆಯ ಉತ್ತರ ಕನ್ನಡ ಭವನದಲ್ಲಿ ಗೋಪಾಲ ಜೆ.ಕೃಷ್ಣಾಜಿ ಮತ್ತು ತಂಡದವರಿಂದ ಭಕ್ತಿಗೀತೆ ವಾಚನ ನಡೆಯಲಿದೆ. ಕೆನರಾ ಬ್ಯಾಂಕ್ ಕಾಲೋನಿಯ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಷ್ಣು ವೆಂಕಟೇಶ್ ಮತ್ತು ತಂಡದವರಿಂದ ಮ್ಯಾಂಡೊಲಿನ್ ವಾದನ ಕಾರ್ಯಕ್ರಮ ನಡೆಯಲಿದೆ.